Wednesday, December 31, 2008

ತಮಿಳುನಾಡು ಟ್ರಿಪ್ - 2008

ದಿನಾಂಕ - ೨೫/೧೨/೨೦೦೮ - ೩೦/೧೨/೨೦೦೮.
ಜಾಗ - ಶ್ರೀರಂಗಂ, ತಿರುಚ್ಚಿರಪಲ್ಲಿ, ತಂಜವುರ್, ತಿರುವಾಯುರ,ಉಚ್ಚುಪ್ಪಿಲೈಯಾರ, ದೇವಿಪಟ್ಟಿನಂ, ರಾಮೇಶ್ವರಂ, ಧನುಷ್ಕೋಡಿ, ಮಧುರೈ.
ಜನ - ವೆಂಕಟಕ್ರಿಷ್ಣಯ್ಯ, ಮೋಹನ, ಸೌಮ್ಯ, ಸಿರಿ, ಸತ್ಯಪ್ರಕಾಶ್, ನಂದ, ಅಪೂರ್ವ, ಮುರಳೀಧರ, ಮೀರಾ, ಅಮೋಘ, ಪ್ರಭಾಕರ್, ವೆಂಕಟೇಶ್, ಪದ್ಮ, ರಾಮಪ್ರಸಾದ್, ಅನುಪಮ, ಸಮರ್ಥ, ಶಂಕರ ನಾರಾಯಣ, ರಾಘವೇಂದ್ರ, ಚಂಪ, ಅನನ್ಯ




ಸಾರಾಂಶ -
ದಿನ ೧ :

ನಾವುಗಳು ಪ್ರತಿ ಸರಿಯಂತೆ ೨೫ ರ ಬೆಳ್ಳಿಗ್ಗೆ (೪.೩೦) ಗೆ ಎದ್ದು ೬ ಗಂಟೆಗೆ ಮನೆಗಳಿಂದ ಹೊರಟು ಈಸ್ಟುಡ ನಲ್ಲಿ ಸೇರಿ ಡಿಸೈರ, ಇನ್ನೋವ, ಲೋಗನ್, ಝೆನ್ ಎಸ್ಟಿಲ್ಲೋ ಕಾರ್ ಗಳಿಗೆ ಪೂಜೆ ಮಾಡಿ ಬನ್ ಕಾಫಿ ಮುಗಿಸಿ ಇಲೆಕ್ಟ್ರಾನಿಕ್ ಸಿಟಿ ಮೇಲೆ ಹೊಸೂರ್ ರಸ್ತೆ ಯಲ್ಲಿ ಚಲಿಸಿದೆವು. ಹೊಸೂರು, ಧರಂಪುರಿ ಬಿಟ್ಟು ತಿಂಡಿ ಬ್ರೇಕ್ ತಗೊಂಡೆವು. ಪ್ರಕಾಶ್ ನಂದ ಮಾಡಿದ ಇಡ್ಲಿ ಕೊಬ್ಬರಿ ಚಟ್ನಿ ತಿಂದು ಕೃಷ್ಣಗಿರಿ, ಸೇಲಂ, ನಮಕ್ಕಲ್ ದಾಟಿ ಕಾವೇರಿ ನದಿಯ ದಡದಲ್ಲಿ ಮಾವ ಮಾಡಿದ ಪುಳಿಯಗರೆ, ಮುರಳಿ ಮಾಡಿದ ಹುಳಿ, ಉಸಲಿ ಮೊಸರನ್ನ ತಿಂದು ಶ್ರೀರಂಗಂಗೆ ೫.೩೦ ಗೆ ತಲುಪಿದೆವು. ಶ್ರೀರಂಗಂ ಒಂದು ಸಂಪ್ರದಾಯದ ಊರು ಮನೆಗಳ ಮುಂದೆ ಜಗುಲಿ ರಂಗೊಲಿಗಳು ರಾರಜಿಸುತ್ತಿದ್ದವು. ದೇವಸ್ಥಾನ ಮತ್ತು ಗೋಪುರಗಳನ್ನು ನೋಡಲು ಎರಡು ಕಣ್ಣು ಸಾಲದು. ರಜೆ ಮತ್ತು ಅಯ್ಯಪ್ಪ ಯಾತ್ರೆಗೆ ಹೊರಟಿರುವ ಜನಗಳ ಸಾಗರವೇ ಅಲ್ಲಿತ್ತು. ೨ ಗಂಟೆಗಳ ಕಠಿಣ ಶ್ರಮದಿಂದ ಶ್ರೀರಂಗನ ದರ್ಶನವಾಯಿತು(ಆದರೆ ನಂದ ಮತ್ತು ಪದ್ಮ ಅತ್ತೆ ಕತ್ತಲಿನಲ್ಲಿ ಶ್ರೀರಂಗನನ್ನು ಗುರುತಿಸಲಿಲ್ಲ !!!) . ಸಿಹಿ ಪೊಂಗಲ್, ಪುಳಿಯೋಗರೆ, ಮೊಸರನ್ನ ಪ್ರಸಾದವನ್ನು ಸೇವಿಸಿ ಅಲ್ಲಿಂದ ಹೊರಟೆವು. ಮುರಳಿಯ ಗೆಳಯ ವಿಜಯ್ ತಿರುಚ್ಚಿರಪಲ್ಲಿಯಲ್ಲಿ ಇತ್ತೀಚೆಗಸ್ಟೆ ಖರೀದಿಸಿದ ಮನೆಯಲ್ಲಿ ನಾವುಗಳು ೨ ರಾತ್ರಿ ಕಳೆದೆವು. ನಮಗೆ ಹೇಳಿ ಮಾಡಿಸಿದ ಹಾಗೆ ಆ ಮನೆಯು ತುಂಬ ಅನುಕೂಲವಾಗಿತ್ತು. ರಾತ್ರಿ ಉಳಿದ ಪ್ರಸಾದ ಮತ್ತು ಮೊಸರನ್ನ ತಿಂದು ಮಸಾಲ ಟೀ ಸೇವಿಸಿ ಎಲ್ಲರು ಮಲಗಿದೆವು (೧ ಗಂಟೆ).
ದಿನ ೨ :



ಬೆಳ್ಳಿಗ್ಗೆ ೫.೩೦ ಇಂದ ನಾವುಗಳು ಎದ್ದು ಸ್ನಾನ ಮುಗಿಸೋ ಹೊತ್ತಿಗೆ ವೆಂಕಟೇಶ್ ಮಾಮ ಉಪ್ಪಿಟ್ಟು, ಬಿಸಿ ಬೇಳೆಬಾತ್ ತಯ್ಯಾರು ಮಾಡಿದ್ದರು. ನಾವುಗಳು ಉಪ್ಪಿಟ್ಟು ತಿಂದು ಬಿಸಿ ಬೇಳೆಬಾತ್ ಪ್ಯಾಕ್ ಮಾಡಿಕೊಂಡು ತಂಜವುರ್ ಗೆ ತೆರಳಿದೆವು. ಅಲ್ಲಿ ಬೃಹದೇಶ್ವರ ದೇವಸ್ಥಾನ ನೋಡಿದೆವು. ಚೋಳರು ಕಟ್ಟಿರುವ ಈ ದೇವಸ್ಥಾನ ಬಹಳ ಪುರಾಥನವಗಿದ್ದು ತುಂಬ ದೊಡ್ಡದಾಗಿದೆ ಇಲ್ಲಿಯ ವಿಶೇಶವೇನೆಂದರೆ ಗೋಪುರದ ಮೇಲೆ ೫ ಟಂನ್ನಿನ ಕಲ್ಲಿನ ಗುಂಡನ್ನು ಸ್ಥಾಪಿಸಿದ್ದಾರೆ, ಮಣ್ಣಿನ ಇಳಿ ಜಾರನ್ನು ನಿರ್ಮಿಸಿ ಆನೆಗಳ ಸಹಾಯದಿಂದ ಕಲ್ಲಿನ ಗುಂಡನ್ನು ಸಾಗಿಸಿದ್ದರೆನ್ನುವ ಪ್ರತೀತಿ ಇದೆ. ಅಲ್ಲಿಂದ ನಾವುಗಳು ತಿರುವಾಯುರಕ್ಕೆ ಬಂದು ಕಾವೇರಿ ನದಿ ತೀರದಲ್ಲಿರುವ ದೇವಸ್ಥಾನಕ್ಕೆ ವೊಂದು ದೊಡ್ಡ ದ್ವಾರದಿಂದ !!! ಬಂದೆವು. ಶ್ರೀರಾಮ, ತ್ಯಾಗರಾಜರ ದೇವಸ್ಥಾನವನ್ನು ನೋಡಿ ತಂದಿದ್ದ ಬಿಸಿ ಬೇಳೆಬಾತ್ ಮತ್ತು ತಿಂಡಿಗಳನ್ನು ಸೇವಿಸಿ ನದಿಯಲ್ಲಿ ೨ ಗಂಟೆಗಳ ಕಾಲ ಆಟವಾಡಿದೆವು. ತಿರುಚ್ಚಿರಪಲ್ಲಿಗೆ ಬೇಗ ಹೋಗಿ ಉಚ್ಚುಪ್ಪಿಲೈಯಾರ ನೋಡುವ ಯೋಚನೆ ನಮ್ಮದು ಆದರೆ ನಾವು ಬಂದ ದೊಡ್ಡ ದ್ವಾರ ಮುಚ್ಚಿತ್ತು, ಹತ್ತಿರದಲ್ಲಿ ಯಾರು ಇಲ್ಲ !!! ಕಷ್ಟ ಪಟ್ಟು ದ್ವಾರದ ಬೀಗದ ಕೈ ಇದ್ದ ಮನುಷ್ಯನನ್ನು ತಂಜವುರ್ ನಿಂದ ಕರೆಸಿದೆವು ಆದರೆ ಅಷ್ಟು ಹೊತ್ತಿಗೆ ೨ ಗಂಟೆಗಳ ಕಾಲ ಕಳೆದಿತ್ತು ಎಲ್ಲರು ಬೇಸತ್ತು ಬೇಜಾರಾಗಿ ಹೊರಟೆವು ಅಷ್ಟರಲ್ಲಿ ಯಾರೋ ಬಂದು ತಿರುಚ್ಚಿರಪಲ್ಲಿಗೆ ಹತ್ತಿರದ ಮಾರ್ಗವನ್ನು ಹೇಳಿದರು. ನಾವು ಈ ಮಾರ್ಗದಲ್ಲೇ ಸಾಗಿದೆವು...ದಾರಿ ಚೆನ್ನಾಗಿತ್ತು ಮಧ್ಯದಲ್ಲಿ ದೊಡ್ಡ ಅಣೆಕಟ್ಟು ಕೂಡ ನೋಡಲು ಸಿಕ್ಕಿತು. ರಾತ್ರಿ ೯ ಗಂಟೆಗೆ ನಾವು ತಿರುಚ್ಚಿರಪಲ್ಲಿಗೆ ಬಂದೆವು. ನಂದ ಮಾಡಿದ ಸಾರು ಅನ್ನ ಊಟ ಮಾಡಿ ೧೨ ಗಂಟೆಗೆ ಮಲಗಿದೆವು.
ದಿನ ೩ :
ಬೆಳ್ಳಿಗ್ಗೆ ೬ ಗಂಟೆಗೆ ವೆಂಕಟೇಶ್ ಮಾಮ, ಪದ್ಮ ಅತ್ತೆ, ಅಪ್ಪ, ನಂದ ಮತ್ತು ಪ್ರಕಾಶ್ ಮತ್ತೆ ಶ್ರೀರಂಗಂ, ಜಂಬು ಕೇಶವ ದೇವಸ್ಥಾನ ನೋಡಲು ಹೊರಟರು ಮತ್ತೆ ಉಳಿದವರೆಲ್ಲ ಮನೆಯನ್ನು ಕಾಲಿ ಮಾಡಿ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿ ಹೋಟೆಲ್ಲಿನ್ನಲ್ಲಿ ತಿಂಡಿ ತಿಂದೆವು. ಉಚ್ಚುಪ್ಪಿಲೈಯಾರ ಗುಡ್ಡ ಹತ್ತಿ ಗಣಪತಿ, ಶಿವ ದೇವಸ್ಥಾನಗಳನ್ನು ಆನಂದಿಸಿ ೧.೩೦ ರ ಹೊತ್ತಿಗೆ ಪುಡುಕೊಟ್ಟೈ ರಸ್ತೆಯಲ್ಲಿ ಶ್ರೀರಂಗಂಗೆ ಹೋಗಿದ್ದ ಕಾರನ್ನು ಸೇರಿ ಎಲ್ಲರು ರಾಮೇಶ್ವರದ ಕಡೆ ಪ್ರಯಾಣಿಸಿದೆವು. ಪುಡುಕೊಟ್ಟೈ ದಾಟಿ ಕರೈಕ್ಕುಡಿಯಲ್ಲಿ ಅನ್ನಪೂರ್ಣ ಹೋಟೆಲ್ನಲ್ಲಿ ಊಟ ಮಾಡಿ ದೇವಿಪಟ್ಟಿನಂ ಕಡೆ ನಡೆದೆವು (೪.೩೦ ಗಂಟೆ). ೬ ಗಂಟೆಯ ಸಮಯಕ್ಕೆ ದೇವಿಪಟ್ಟಿನಂನಿಂದ ೨೫ ಕಿ.ಮಿ. ದೂರದಲ್ಲಿ ಎಸ್ಟಿಲ್ಲೋ ಕಾರಿನೂಂದು ಚಕ್ರ ಪಂಚ್ಚರ್ ಆಯಿತು ಅದನ್ನು ಬದಲಾಯಿಸಿ ದೇವಿಪಟ್ಟಿನಂ ಸೇರುವ ಹೊತ್ತಿಗೆ ೭ ಗಂಟೆ ಆಗಿತ್ತು. ದೇವಿಪಟ್ಟಿನಂನಲ್ಲಿ ಶ್ರೀರಾಮ ನಿರ್ಮಿಸಿದ ನವಗ್ರಹಗಳನ್ನು (ನವಪಾಶಾಣ - ಬ್ರಹ್ಮ ಹತ್ಯ ದೋಷದಿಂದ [ರಾವಣನನ್ನು ಕೊಂದು] ಮುಕ್ತಿ ಪಡೆಯಲು) ನೋಡಿ ರಾಮನಥಪುರದ ಕಡೆ ಹೊರಟೆವು. ೯.೩೦ ರ ಹೊತ್ತಿಗೆ ರಾಮನಥಪುರದ ಐಶ್ವರ್ಯ ಹೋಟೆಲ್ಲಿನಲ್ಲಿ ಊಟ ಮುಗಿಸಿ ೧೦.೩೦ ಗೆ ಪಾಮ್ಬಂ ಸೇತುವೆಯ ಮೇಲೆ ಹರಿದು ರಾಮೇಶ್ವರ ಸೇರಿದೆವು. ನಮ್ಮ ಅದೃಷ್ಟಕ್ಕೆ ಮಾರನೆಯ ದಿನ ಭಾರತದ ಪ್ರಧಾನಿ ಪ್ರತಿಭಾ ಪಾಟೀಲ್ ಬಾರೋ ಕಾರ್ಯಕ್ರಮವಾಗಿತ್ತು. ನಾವು ರಿಸರ್ವ್ ಮಾಡಿದ್ದ ೪ ಅತ್ತಚೆದ್ ರೂಮುಗಳ ಜಾಗದಲ್ಲಿ ೨ ಜನರಲ್ ರೂಮ್ಗಳು ಮಾತ್ರ ಸಿಕ್ಕಿದವು. ಹೇಗೋ ಅಡ್ಜಸ್ಟ್ ಮಾಡಿಕೊಂಡು ಅಲ್ಲೇ ರಾತ್ರಿ ಮಲಗಿದೆವು.
ದಿನ ೪ :











ಮಾರನೆಯ ದಿನ ಬೆಳ್ಳಿಗ್ಗೆ ೭ ಗಂಟೆಗೆದ್ದು ಸಮುದ್ರ ಸ್ನಾನ ಮಾಡಿ ಅಭಿರಾಮಿ ಹೋಟೆಲ್ಲಿನಲ್ಲಿ ತಿಂಡಿ ತಿಂದು ಪ್ರಧಾನಿ ೩ ಗಂಟೆಗೆ ಹೋಗೋ ತನಕ ವಿಶ್ರಾಂತಿ ಪಡೆದು ಒಬ್ಬ ಗೈಡ್ನನ್ನು ಜೊತೆಗೆ ಕರೆದುಕೊಂಡು ಧನುಷ್ಕೋಡಿ ನೋಡಲು ಹೊರಟೆವು. ದಾರಿಯಲ್ಲಿ ಗಂಧಮಾಧವ ಪರ್ವತದ ಮೇಲೆ ರಾಮ ಪಾದವನ್ನು ವೀಕ್ಷಿಸಿ ನಡೆದೆವು. ೧೦ ಕಿ.ಮಿ. ದೂರದಲ್ಲಿ ವಿಭೀಷಣನ ದೇವಸ್ಥಾನವನ್ನು ನೋಡಿಕೊಂಡು ಮುಂದೆ ಸರಿದೆವು ಅಲ್ಲಿಂದ ಆದ ಗಟನೆಗಳು ನಾನು ಎಂದಿಗೂ ಮರೆಯಲಾರೆ...
ನಾವುಗಳು ಧನುಷ್ಕೋಡಿಯಿಂದ ೧೨ ಕಿ.ಮಿ. ದೂರದಲ್ಲಿರುವ ನೌಕಾ ಪಡೆಯ ಚೆಕ್ ಪೋಸ್ಟಿನಲ್ಲಿ ನಮ್ಮ ಕಾರುಗಳನ್ನು ಬಿಟ್ಟು ಒಂದು ಮಿನಿ ಟ್ರೆಕ್ಕಿನಲ್ಲಿ ಹೊರಟೆವು, ನಿರ್ಜನ ಪ್ರದೇಶ ಮಧ್ಯದಲ್ಲಿ ರಸ್ತೆ ೧೫ ಅಡಿ ದೂರಕ್ಕೆ ಎರಡೂ ಪಕ್ಕದಲ್ಲಿ ಸಮುದ್ರ, ಸಾಮನ್ಯ ವಾಹನಗಳು ಚಲಿಸಲು ಸಾಧ್ಯವಿಲ್ಲ ಫೋರ್ ವ್ಹೀಲ್ ಡ್ರೈವ್ ಇರುವಂತಹ ಗಾಡಿಗಳು ಮಾತ್ರ ಹೋಗಬಹುದು ದಾರಿಯಲ್ಲಿ ೨ ಅಡಿ ಮರಳು ಒಳ್ಳೆ ನ್ಯಾಷನಲ್ ಜೆಯೋಗ್ರಫಿಕ್ ಎಕ್ಷಪೆಡಿಶನ್ಗೆ ಹೋದ ತರಹ ಇತ್ತು. ಕೆಲವರು ಟ್ರೆಕ್ಕಿನ ವಳಗೆ, ಕೆಲವರು ಡ್ಯಾಶ್ ಬೋರ್ಡಿನ ಮೇಲೆ, ಕೆಲವರು ಟಾಪಿನ ಮೇಲೆ ನಿಂತು ಹೊರಟೆವು. ಧನುಷ್ಕೋಡಿಯ ತುದಿಯಿಂದ ೫ ಕಿ.ಮಿ. ದೂರದಲ್ಲಿದ್ದಾಗ ನಮ್ಮ ಟ್ರಕ್ ಕೆಟ್ಟು ಹೋಯಿತು, ನಾವುಗಳು ಅಲ್ಲಿಂದ ೨ ಕಿ.ಮಿ. ಸಮುದ್ರದ ಪಕ್ಕದಲ್ಲಿ ಸೂರ್ಯಾಸ್ತವನ್ನು ನೋಡುತ್ತ ವಿವಿಧ ಮೀನುಗಳ ಅವಶೇಷಗಳನ್ನು ಗಮನಿಸುತ್ತ ನಡೆದೆವು. ಧನುಷ್ಕೋಡಿ ಊರು ೧೯೭೪ ರ ಚಂಡ ಮಾರುಥಕ್ಕೆ ಸಿಕ್ಕಿ ನಾಶವಾಗಿ ಹೋಗಿದೆ ಕೇವಲ ಮೀನುಗಾರರ ಗುಡಿಸುಳುಗಳಲ್ಲನ್ನು ನೋಡಬಹುದು, ಕಟ್ಟಡಗಳ ಗೋಡೆಗಳು ಮಾತ್ರ ನಿಂತಿವೆ. ಕತ್ತಲು ಕವಿಯತೊಡಗಿತು ಟ್ರಕ್ಕಿನ್ನು ರಿಪೇರಿ ಆಗಲಿಲ್ಲ ನಮ್ಮ ಗೈಡ್ ಗೆ ಭಯವಾಗಿ ಧನುಷ್ಕೋಡಿ ಇದೆ, ಇನ್ನು ಮುಂದೆ ನೋಡುವ ಜಾಗವೇನಿಲ್ಲ ಎಂದು ಹೇಳಿದಾಗ ನಮಗೂ ಅವನಿಗೂ ವಾದ / ಜಗಳವಾಯಿತು. ಧನುಷ್ಕೋಡಿಯಲ್ಲಿ ರಾಮ ತನ್ನ ಶಿವಧನಸ್ಸನ್ನು ರಾಮ ಸೇತುವೆಯ ಸ್ಥಿರ ಸ್ಥಂಭವಾಗಿ ನೆಟ್ಟು ನಳ ಮತ್ತು ನೀಲ ಎಂಬ ವಾಸ್ತುಶಿಲ್ಪಿಗಳ ಸಹಾಯದಿಂದ ಮತ್ತು ವಾನರ ಸೇನೆಯ ಸಹಾಯದಿಂದ ಸೇತುವೆಯನ್ನು ಭಾರತ ಮತ್ತು ಲಂಕೆಯ ನಡುವೆ ನಿರ್ಮಿಸಿದ್ದನು.
ಕೊನೆಗೆ ನಾವುಗಳು ಚಿಕ್ಕ ಮಕ್ಕಳುಗಳಿದಿದ್ದರಿಂದ ಆ ಕತ್ತಲಿನಲ್ಲಿ, ಸಮುದ್ರದ ಪಕ್ಕದ ಮಣ್ಣಿನಲ್ಲಿ ಕಾಲು ಕುಸಿದುಹೊಗುತ್ತಿದ್ದರು, ಬೇರೆ ಯೋಚಿಸದೆ ಮರಳಿ ಬೇರೊಂದು ಟ್ರಕ್ಕಿಗೆ ಹತ್ತಿ, ನಮ್ಮ ಕಾರುಗಳಿಗೆ ಬಂದೆವು ಮತ್ತು ರಾಮೇಶ್ವರಕ್ಕೆ ಬಂದು ಅಲ್ಲಿ ಶಂಕು, ಹವಳ ವ್ಯಾಪಾರ ಮಾಡಿ ಒಪ್ಪಿಟ್ಟು ತಿಂದು ಒಂದು ಸಣ್ಣ ಸಮುದ್ರದ ಪಕ್ಕದ ವಾಲ್ಕಿನ ನಂತರ ಮಲಗಿದೆವು.
ದಿನ ೫ :


ನಮ್ಮುಗಳ ರಾಮೇಶ್ವರದ ತೀರ್ಥಯಾರ್ಥೆ ದಿನವಿದು. ಬೆಳ್ಳಿಗ್ಗೆ ೬ ಘಂಟೆಗೆ ಎದ್ದು ಸಮುದ್ರ ಸ್ನಾನ ಮುಗಿಸಿ ಒಬ್ಬ ಗೈಡ್ ನನ್ನು ನೇಮಿಸಿ ೨೨ ಪವಿತ್ರ ತೀರ್ಥಗಳಿಂದ (ಭಾವಿಗಳು) ಸ್ನಾನ ಮಾಡಿದೆವು. ಈಶ್ವರನ ದರ್ಶನ ಮಾಡಿ ೧೦೦೦ ಕಂಬಗಳ ದೇವಸ್ಥಾನವನ್ನು ನೋಡಿಕೊಂಡು ನಾವುಗಳು ತಿಂಡಿ ಮುಗಿಸಿ ಸಾಮಾನುಗಳನ್ನು ಪ್ಯಾಕ್ ಮಾಡಿಕೊಂಡು ಮಧುರೈಗೆ ಪ್ರಯಾಣಿಸಿದೆವು. ದಾರಿಯಲ್ಲಿ ಪಾಂಬನ ಸೇತುವೆಯ ಮನೋಹರ ದೃಶ್ಯವನ್ನು ಸವಿದು ರಾಮನಥಪುರದ ಐಶ್ವರ್ಯ ಹೋಟೆಲ್ಲಿನಲ್ಲಿ ಊಟ ಮಾಡಿಕೊಂಡು ಸಂಜೆ ೬.೩೦ ಗೆ ಮದುರೈ ಸೇರಿದೆವು. ಅಲ್ಲಿ ನಾವು ಬುಕ್ ಮಾಡಿದ್ದ ರೂಮ್ ಗಳು ಖಾತ್ರಿ ಆಗದಿದ್ದ ಕಾರಣ ನಮ್ಮ ಎಜೆಂಟಗೆ ಫೋನ್ ಮಾಡಿ ಜಗಳವಾಡಿ ೫ ರೂಂಗಳನ್ನು ತೆಗೆದುಕೊಂಡೆವು. ರಾತ್ರಿ ೮.೩೦ ಕ್ಕೆ ಮೀನಾಕ್ಷಿ ದೇವಸ್ಥಾನ ನೋಡಲು ಹೋದೆವು ಆದರೆ ೭.೩೦ ಕ್ಕೆ ಜನರನ್ನು ಒಳಗೆ ಬಿಡುವುದಿಲ್ಲ ಎಂದರು. ನಾವುಗಳು ಕೆಲವು ಅಂಗಡಿಗಳನ್ನು ನೋಡಿಕೊಂಡು ಮಾಡರ್ನ್ ಕೆಫೆಯಲ್ಲಿ ತಿಂಡಿಗಳನ್ನು ಸೇವಿಸಿ ಹೋಟೆಲ್ಲಿಗೆ ತೆರಳಿ ಮಲಗಿದೆವು.
ದಿನ ೬ :




ಬೆಳಿಗ್ಗೆ ೬ ಘಂಟೆಗೆ ಎದ್ದು ೭.೩೦ ರ ಹೊತ್ತಿಗೆ ಮೀನಾಕ್ಷಿ ದೇವಸ್ಥಾನಕ್ಕೆ ಹೊರಟೆವು. ಕಡಿಮೆ ಜನರಿದ್ದ ಕಾರಣ ಮೀನಾಕ್ಷಿ, ಸುಂದರೆಶ್ವರ ದೇವರ ದರ್ಶನ ಬೇಗ ಮುಗಿಯಿತು. ಆಮೇಲೆ ನಾವುಗಳು ಮೀನಾಕ್ಷಿ ದೇವಸ್ಥಾನದ ಚೆಂದದ ಕೆತ್ತನೆಗಳನ್ನೂ ಆನಂದಿಸಿ ಮಕ್ಕಳಿಗೆ ಕೆಲವು ಆಟದ ವಸ್ತುಗಳನ್ನು ಕೊಂಡು ಹೊರಗೆ ನಡೆದೆವು. ಅಂಗಡಿಗಳನ್ನು ನೋಡುತ್ತಾ ನಾವುಗಳು ಸೀರೆಗಳನ್ನೂ ಕೊಂಡು ತಿಂಡಿಗೆ ಮತ್ತೆ ಮಾಡರ್ನ್ ಕೆಫೆಗೆ ಬಂದೆವು ಸ್ವಾದಿಷ್ಟವದ ತಿಂಡಿ ತಿನುಸುಗಳನ್ನು ಸೇವಿಸಿ ನಾವುಗಳು ಹೋಟೆಲ್ಲಿಗೆ ಮರಳಿ ನಮ್ಮ ಸಾಮಾನುಗಳನ್ನು ಪ್ಯಾಕ್ ಮಾಡಿಕೊಂಡು ಬೆಂಗಳೂರಿನ ಕಡೆಗೆ ಹೊರಟೆವು. ಸುಮಾರು ೨ ಘಂಟೆಗೆ ಊಟಕ್ಕೆ ನಿಲ್ಲುವ ಯೋಚನೆ ಇದ್ದರು ಸೇಲಂನ ಹತ್ತಿರ ರಸ್ತೆ ಸರಿಯಿಲ್ಲ ಎಂದು ತಿಳಿದುಕೊಂಡು ದಿಂಡಿಗಲ್ಲು, ಕರೂರು, ನಮಕ್ಕಲ್ಲು ದಾಟಿ ನಮ್ಮ ಹತ್ತಿರವೇ ಇದ್ದ ತಿಂಡಿಗಳನ್ನು ೩.೩೦ ಗೆ ಸೇವಿಸಿ ಹೊರಟೆವು. ಸೇಲಂ ದಾಟಿ ಧರ್ಮಪುರಿಯಾ ಹತ್ತಿರ ಎಳನೀರು ಸೇವಿಸಿ ಕೃಷ್ಣಗಿರಿಯ ಹಿಂದೆ ಇರುವ ಆನಂದ ಭವನದಲ್ಲಿ ಊಟ ಮುಗಿಸಿ ಸುಂದರವಾದ ಎನ್ ಎಚ - ೭ ರಲ್ಲಿ ವೇಗವಾಗಿ ಬಂಗಳೂರಿಗೆ ಬಂದು ತಲುಪಿದೆವು. ಸುಮಾರು ೧೦.೩೦ ರ ಹೊತ್ತಿಗೆ ನಾರಾಯಣ ಹೃದಯಾಲಯದ ಬಳಿ ಎಲ್ಲರು ಸೇರಿ ಟಾ ಟಾ ಹೀಳಿ ನಮ್ಮ ನಮ್ಮ ಮನೆಗಳಿಗೆ ಬಂದು ಸೇರುವ ಹೊತ್ತಿಗೆ ೧೧.೩೦ ಆಗಿತ್ತು. ಇಲ್ಲಿಗೆ ನಮ್ಮ ಈ ಸುಂದರವಾದ ಯಾತ್ರೆ ಮುಗಿಯಿತು.

ನಮ್ಮ ೨೦೦೯ ರ ಯಾತ್ರೆಗೆ ಇದೇ ವೆಬ್ ಸೈಟ್ ನನ್ನು ಕಾದು ನೋಡಿ...

Thursday, October 16, 2008

Siri Birthday

Dear,



You (with family) are invited to our daughter's Birthday. Please do not miss the party...









Regards,
Mohan Sowmya